HEALTH TIPS

About

Example
     "ಸಮರಸ"ವೆಂದರೆ ಎಲ್ಲಾ ಭಾವಗಳ ಸಮಭಾವದ 
ಸಂಯೋಜನೆ ಎಂದು ಅರ್ಥ. ಒಂದರ್ಥದಲ್ಲಿ ಎಲ್ಲದಕ್ಕೂ 
ಶರಣಾಗಿ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಂಡು
 ಬದ್ದತೆಯಿಂದ ಬುದ್ದನಾಗುವ ಪ್ರಕ್ರಿಯೆ!
   ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕೃತಿ
 ಶ್ರೀಮಂತವಾಗಿದ್ದರೂ ಆಡಳಿತಾತ್ಮಕವಾಗಿ ಕೇರಳದ
 ಭಾಗವಾಗಬೇಕಾದ ಅನಿವಾರ್ಯತೆಯ ಮಧ್ಯೆ ಇಲಿನ 
ಮೂಲತ್ವವನ್ನು ಅವಿಚ್ಚಿನ್ನವಾಗಿ ಮುಂದುವರಿಸುವ 
ನಿಟ್ಟಿನಲ್ಲಿ ಹೊಸ ವ್ಯಾಖ್ಯಾನಗಳ-ಚಿಂತನೆಗಳ ಅಗತ್ಯ 
ಇದ್ದೇ ಇದೆ. ಜಿಲ್ಲೆಯಲ್ಲಿ ಸಾಕಷ್ಟು ಇತರ ಭಾಷೆಗಳ ಸುದ್ದಿ
 ಪ್ರಸರಣದ ಆಧುನಿಕ ಮಾಧ್ಯಮಗಳಿದ್ದರೂ ಕನ್ನಡದಲ್ಲಿ 
ಅಂತಹ ಗಟ್ಟಿ ವ್ಯವಸ್ಥೆಗಳಿಲ್ಲದಿರುವುದು ಹಲವು ನಷ್ಟಗಳಿಗೆ 
ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಸಮರಸ ಸುದ್ದಿ ಉಚಿತ 
ಬ್ಲಾಗ್ ವ್ಯವಸ್ಥೆಗೆ ರೂಪುನೀಡಲಾಗಿದೆ.
   ಕಳೆದೊಂದು ವರ್ಷದಿಂದ ಜಿಲ್ಲೆಯ ಉದ್ದಗಲದ 
ಸುದ್ದಿಗಳನ್ನು, ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದ 
ಸಕಾರಾತ್ಮಕ, ನಮ್ಮನ್ನಾಳ್ವ ಸರಕಾರಗಳ ಜನಪರ
 ಚಟುವಟಿಕೆಗಳ ಅಲ್ಪ ಮಾಹಿತಿಗಳನ್ನು 
ಮಿತಿಗೊಳಪಟ್ಟು ಸಮರಸ ಓದುಗರಿಗೆ ತಲಪಿಸುತ್ತಿದೆ.
   ಮೂಲತಃ ಕನ್ನಡ ಭಾಷೆ, ಸಂಸ್ಕೃತಿಗೆ ಬೆನ್ನೆಲುಬಾಗುವ 
ಸಾಹಿತ್ಯ, ಕಲೆ, ಶಿಕ್ಷಣ ಜೊತೆಗೆ ಕೃಷಿ ಕ್ಷೇತ್ರದ ಮಹತ್ವಗಳ 
ಪ್ರಸರಣಕ್ಕೆ ಸಮರಸ ಸುದ್ದಿ ಹುಟ್ಟಿಕೊಂಡಿತಾದರೂ 
ವರ್ತಮಾನದ ಸುದ್ದಿ ಮೌಲ್ಯಗಳ ಪ್ರಸರಣಕ್ಕೆ 
ಬಳಸಲಾಗುತ್ತಿದೆ.
    ಸಮರಸದ ಅಂತಮರ್ುಖದಲ್ಲಿ ಹಲವು 
ಕನಸುಗಳಿದ್ದು, ಸಹೃದಯ ಓದುಗರ ನಿರಂತರ
 ಪ್ರೋತ್ಸಾಹದಿಂದ ಹಂತಹಂತವಾಗಿ ಸಮಾಜವನ್ನು
 ಕಟ್ಟಿ ಬೆಳೆಸಬೇಕೆಂಬುದಷ್ಟೇ ಅಂತಿಮ ಕಳಕಳಿ.
 ಬುದ್ದನಾಗುವುದು ಒಂದು ರಾತ್ರಿ ಬೆಳಗಾಗುವಾಗ 
ಆಗಿರುವುದಲ್ಲವಷ್ಟೇ!  
                                                         ಸಂಪಾದಕಿ 
                                          ಅಕ್ಷತಾ ಪಿ.ಭಟ್.ಪುದುಕೋಳಿ 
                                                      ಕಾಸರಗೋಡು.

Post a Comment

0 Comments
* Please Don't Spam Here. All the Comments are Reviewed by Admin.