ಉಡುಪಿಯಲ್ಲಿ ವಿದ್ವಾಂಸರ ಮೆಚ್ಚುಗೆ ಪಡೆದ ಸಿರಿಬಾಗಿಲು ಪ್ರತಿಷ್ಠಾನದ `ಅಥರ್ಾಂತರಂಗ-5' ಅರ್ಥಗಾರಿಕಾ ಶಿಬಿರ
   ಉಡುಪಿ: ಗಡಿನಾಡಿನ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆ `ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು' `ಶ್ರೀ ವಿದ್ಯಾದಾಯಿನಿ ಯಕ್ಷಗಾನ ಸಭಾ ಬಡಗು ಪೇಟೆ ಉಡುಪಿ' ಸಂಸ್ಥೆಯ ಸಹಯೋಗದೊಂದಿಗೆ ಉಡುಪಿಯ ಎಂ.ಜಿ.ಎಂ. ಕಾಲೇಜು ಆವರಣದಲ್ಲಿರುವ ಧ್ವನ್ಯಾ ಲೋಕ'ದಲ್ಲಿ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕಾ ಅಧ್ಯಯನ ಶಿಬಿರ `ಅಥರ್ಾಂತರಂಗ-5' ಯಶಸ್ವಿಯಾಗಿ ಜರಗಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಯಿತು.
    ಪ್ರಸಿದ್ಧ ಅರ್ಥಧಾರಿಗಳು, ವಿದ್ವಾಂಸರು ಲೇಖಕರೂ ಆಗಿರುವ ರಾಧಾಕೃಷ್ಣ ಕಲ್ಚಾರ್ ಅವರ ಸಮರ್ಥ ನಿದರ್ೇಶನದಲ್ಲಿ ತಾಳಮದ್ದಳೆ ಅರ್ಥಗಾರಿಕೆಯ ಅಧ್ಯಯನವನ್ನು ಗುರಿಯಾಗಿರಿಸಿರುವ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕಲಾ ವಿಮರ್ಶಕರು ಸಾಹಿತಿಗಳು ಆಗಿರುವ ಎ.ಈಶ್ವರಯ್ಯ ಮಾತನಾಡಿ ಕಲೆಯಲ್ಲಿ ಸಕಾಲಿಕವಾದ ಹಾಗೂ ಕಲೋಚಿತವಾದ ಚಿಂತನ ಮಂಥನಗಳಿಂದ ಕಲೆಯ  ಮೂಲ ಸತ್ವವನ್ನು ಉಳಿಸಿಕೊಳ್ಳಬಹುದು. ಆ ಕಾರ್ಯವನ್ನು ಕಲೆಯ ಒಳಗಿದ್ದುಕೊಂಡೇ ಕಲಾವಿದನೇ ನಡೆಸಿದಾಗ ಆಂತರಿಕ ಬೆಳವಣಿಗೆ ಯಾಗುತ್ತದೆ. ಬಾಹ್ಯ ವ್ಯಕ್ತಿ ನಡೆಸಿದಾಗ ಕಲೆಯ ವಿದಳನಕ್ಕೆ ಕಾರಣವಾಗುತ್ತದೆ. ಕಲಾ ಕ್ಷೇತ್ರದಲ್ಲೇ ದುಡಿಯುವವನಿಗೆ ಅದೇನೋ ಕೊರತೆ ಅನುಭವಕ್ಕೆ ಬಂದಾಗ ತನ್ನಿಂದಾದ ಪ್ರಯತ್ನವನ್ನು ನಡೆಸಿ ಅದನ್ನು ಸರಿಪಡಿಸುವ ಆಂತರಿಕ ತುಡಿತದಿಂದ ಕಲಾವಿದ ಮುಂದಡಿಯಿಟ್ಟಾಗ ಆತನ ಪ್ರಾಮಾಣಿಕ ಪ್ರಯತ್ನ ಸಾರ್ಥಕ್ಯವಾಗುತ್ತದೆ ಹಾಗೂ ಮೌಲ್ಯಯುತವಾಗಿರುತ್ತದೆ. ಇಂತಹಾ ಕಾರ್ಯವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ನಡೆಸುತ್ತಿರುವುದು ಶ್ಲಾಘನಾರ್ಹ ಎಂದು ಪ್ರಶಂಸೆಯ ಮಾತನ್ನಾಡಿದರು. ವಿದ್ಯಾದಾಯಿನಿ ಯಕ್ಷಗಾನ ಸಭಾ ಬಡಗುಪೇಟೆ ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ಪಾಂಗಣ್ಣಾಯ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಒಟ್ಟು ನಾಲ್ಕು ಗೋಷ್ಠಿಗಳು ಜರಗಿದ್ದು `ರಾಗ, ಭಾವ, ಲಯ, ವೈಖರಿ'ಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮುಕ್ತ ಸಂವಾದ ಜರಗಿತು.
   ಗುರುರಾಜ ಹೊಳ್ಳ ಬಾಯಾರು  ನಿರೂಪಿಸಿದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಯಕ್ಷಗಾನ ಕ್ಷೇತ್ರದ ವಿದ್ವಾಂಸರುಗಳಾದ ಕೆ.ಎಲ್.ಕುಂಡತ್ತಾಯ, ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿ, ನಾಗರಾಜ ಉಡುಪ, ಮೋಹನ ತೋನ್ಸೆ, ಭಾಗವಹಿಸಲಿದ್ದು, ಅಣ್ಣಯ್ಯ ಪಾಲನ್ ಅಂಬಾಗಿಲು ಉಡುಪಿ, ಕಿಶೋರ್ ಕುಮಾರ್ ಕಳತ್ತೂರು, ಸಚ್ಚಿದಾನಂದ ನಾಯಕ್ ಬೆಲ್ಲತ್ರೆ, ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ ಹಾಗೂ ಅನೇಕ ಆಸಕ್ತ ಕಲಾವಿದರು ವಿದ್ವಾಂಸರು ಉಪಸ್ಥಿತರಿದ್ದರು. ಜಿ.ಯಸ್.ಟಿ.ಅಸಿಸ್ಟೆಂಟ್ ಕಮಿಶನರ್ ಗಿರೀಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿದ್ದರು.
ಕಲಾವಿದರಾಗಿ ಹಿಮ್ಮೇಳದಲ್ಲಿ ರಾಮಕೃಷ್ಣ  ಮಯ್ಯ ಸಿರಿಬಾಗಿಲು, ರಮೇಶ್ ಭಟ್ ಪುತ್ತೂರು, ರಾಮಚಂದ್ರ ಪಾಂಗಣ್ಣಾಯ, ಮುರಳಿ ಕಡಂಬಳಿತ್ತಾಯ, ಉದಯ ಕಂಬಾರು, ಸುಬ್ರಹ್ಮಣ್ಯ ಚಿತ್ರಾಪುರ  ಅರ್ಥಧಾರಿಗಳಾಗಿ  ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ಬೆಳ್ತಂಗಡಿ ಕರುಣಾಕರ ಶೆಟ್ಟಿ, ನಾರಾಯಣ ಹೆಗಡೆ ಭಾಗವಹಿಸಿದ್ದರು.
   ಯಕ್ಷಗಾನ ಕಲಾ ರಂಘ ಉಡುಪಿ, ಶ್ರೀ ದುಗರ್ಾ ಪರಮೇಶ್ವರೀ ತಾಳ ಮದ್ದಳೆ ವೇದಿಕೆ ಪುತ್ತೂರು ಉಡುಪಿ, ಮಹಿಷಮದರ್ಿನಿ ಯಕ್ಷಗಾನ ಮಂಡಳಿ ಬೈಲೂರು, ವೀರಭದ್ರ ಸ್ವಾಮಿ ಕಲಾಮಂಡಳಿ ಕಿನ್ನಿ ಮೂಲ್ಕಿ ಉಡುಪಿ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಮಾರ್ಪಳ್ಳಿ ಶಿಬಿರಕ್ಕೆ ಸಹಕರಿಸಿದವು

Comments