HEALTH TIPS

No title

ಆಡಳಿತ ಮಂಡಳಿ ಹೊರದಬ್ಬಿದ ಶಿಕ್ಷಕಿಯ ಮರುಸೇರ್ಪಡೆಗೆ ಸುಪ್ರೀಕೋಟರ್್ ಆದೇಶ ಬದಿಯಡ್ಕ: ಶಾಲಾ ಡಿವಿಶನ್ ಕೊರತೆಯ ಕಾರಣ ಶಾಲಾ ಆಡಳಿತ ಮಂಡಳಿಯವರು ಹೊರದಬ್ಬಿದ ಪ್ರಕರಣದ ಶಿಕ್ಷಕಿಯನ್ನು ಹೊರಗಟ್ಟಿರುವುದು ಸರಿಯಲ್ಲವೆಂದು ರಾಜ್ಯ ಹೈಕೋಟರ್್ ನೀಡಿದ ತೀರ್ಪನ್ನು ಉಚ್ಚ ನ್ಯಾಯಾಲಯ (ಸುಪ್ರೀಂ ಕೋಟರ್್)ಎತ್ತಿಹಿಡಿಯುವುದರೊಂದಿಗೆ ನ್ಯಾಯಕೋರಿ ಶಿಕ್ಷಕಿ ಸಲಲಿಸಿದ್ದ ವಿವಾದಾತ್ಮಕ ಅಜರ್ಿ ಕೊನೆಗೂ ಯಶ ಕಂಡಿದೆ. ಕುಂಬಳೆ ಉಪಜಿಲ್ಲಾ ವ್ಯಾಪ್ತಿಯ ಪಳ್ಳತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ರೋಜಾ ಮರಳಿ ಶಾಲೆಗೆ ಸೇರ್ಪಡೆ ಗೊಳಿಸಲು ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ವಿವಾದಕ್ಕೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿಯ ಅಪೀಲನ್ನು ರಾಜ್ಯ ಉಚಚ ನ್ಯಾಯಾಲಯ ಮತ್ತು ಬಳಿಕ ಸುಪ್ರೀಂ ಕೋಟರ್್ ಇದೀಗ ತಳ್ಳಿ ಅಧ್ಯಾಪಿಕೆಯ ವಾದವನ್ನು ಎತ್ತಿಹಿಡಿದಿದೆ. 2017 ಅಕ್ಟೋಬರ್ 30 ರಂದು ಸುಪ್ರೀಂ ಕೋಟರ್್ ಜಸ್ಟೀಸ್ ಗಳಾದ ಆದರ್ಶಕುಮಾರ್ ಗೋಯಲ್, ಉದಯ್ ಉಮೇಶ್ ಲಲಿತ್ ಎಂಬವರ ವಿಭಾಗೀಯ ಪೀಠ ವಾದ ಆಲಿಸಿ ಮಹತ್ತರ ತೀಪರ್ು ನಿಡಿದೆ. ಕಳೆದ ಆರು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೊನೆಗೂ ಶಿಕ್ಷಕಿಗೆ ನ್ಯಾಯದೊರಕುವಲ್ಲಿ ಸಫಲತೆ ಮೂಡಿಬಂದಿದೆ. ಕಳೆದ 2000ನೇ ಜುಲೈ 12 ರಂದು ಪಳ್ಳತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇರ್ಪಡೆಗೊಂಡಿದ್ದರು. ಆದರೆ ಶಾಲೆಯಲ್ಲಿ ಒಂದು ಡಿವಿಶನ್ ಕೊರತೆಯಾದ ಹಿನ್ನೆಲೆಯಲ್ಲಿ 2009 ಜುಲೈ 15 ರಂದು ಶಿಕ್ಷಕಿಯನ್ನು ಸೇವೆಯಿಂದ ಹೊರತುಪಡಿಸಲಾಗಿತ್ತು. 2011 ಎಪ್ರೀಲ್ 1 ರಂದು ಶಾಲೆಯ ಕನ್ನಡ ವಿಭಾಗದಲ್ಲಿ ಒಂದು ಶಿಕ್ಷಕರ ಹುದ್ದೆ ತೆರವಾಗಿದ್ದಾಗ ಕನ್ನಡ ಭಾಷೆ ಅರಿತಿರುವ ರೋಜಾ ರನ್ನು ಕಡೆಗಣಿಸಿ ಬೇರೊಬ್ಬರನ್ನು ಶಾಲಾ ಆಡಳಿತ ಸಮಿತಿ ನೇಮಕಗೊಳಿಸಿತ್ತು.ಈ ಮೂಲಕ ಡಿವಿಶನ್ ಕೊರತೆಯ ಕಾರಣ ಉದ್ಯೋಗ ಕಳೆದುಕೊಂಡ ಶಿಕ್ಷಕರಿಗೆ ಬೇರೆ ಸಂದರ್ಭದಲ್ಲಿ ಶಿಕ್ಷಕ ಹುದ್ದೆ ತೆರವಾದಾಗ ನೀಡಬೇಕಿದ್ದ ಮೊದಲ ಆದ್ಯತೆಯನ್ನು ನಿರ್ಲಕ್ಷ್ಯಿಸಿ ಶಾಲಾ ಆಡಳಿತ ನಡೆಸಿದ ಅಕ್ರಮದ ವಿರುದ್ದ ರೋಜಾ ಬಳಿಕ ನ್ಯಾಯಾಲಯಕ್ಕೆ ಅಜರ್ಿ ಸಲ್ಲಿಸಿ ನ್ಯಾಯಕ್ಕೆ ಬೇಡಿಕೆ ಸಲ್ಲಿಸಿದ್ದರು.ಈ ಬಗ್ಗೆ ಶಿಕ್ಷಕಿ ರೋಜಾ 2011 ರಲ್ಲಿ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಬಳಿಕ ಜಿಲ್ಲಾ ವಿದ್ಯಾಭ್ಯಾಸ ಉಪನಿದರ್ೇಶಕರು ಈ ಬಗ್ಗೆ ವರದಿ ನೀಡುವಂತೆ ಸಹಾಯಕ ಉಪಜಿಲ್ಲಾ ವಿದ್ಯಾಧಿಕಾರಿಗಳಿಗೆ ಆದೇಶ ನೀಡಿತ್ತು.ಇದರ ವಿರುದ್ದ ಶಾಲಾ ಪ್ರಬಂಧಕ ಹರಿಕುಮಾರ್ ರಾಜ್ಯ ಉಚ್ಗಚ ನ್ಯಾಯಾಲಯದಲ್ಲಿ ಅಜರ್ಿ ಸಲ್ಲಿಸಿದ್ದರೂ ನ್ಯಾಯಾಲಯ ಶಿಕ್ಷಕಿಯನ್ನು ಸೇವೆಯಲ್ಲಿ ಮುಂದುವರಿಸಲು ನಿದರ್ೇಶಿಸಿತ್ತು. ಈ ಹಿಂದೆ ರೋಜಾರ ಬದಲಿಗೆ ಕನ್ನಡ ವಿಭಾಗಕ್ಕೆ ಸೇರ್ಪಡೆಗೊಳಿಸಿದ್ದ ಶಿಕ್ಷಕನ ನೇಮಕಾತಿಯನ್ನು ಅನೂಜರ್ಿತಗೊಳಿಸಿದ್ದು, ಕಳೆದ ಆರು ವರ್ಷಗಳ ಸಂಬಳ ಸಹಿತ ಎಲ್ಲಾ ಅನುಕೂಲತೆಗಳನ್ನು ನೀಡಬೇಕೆಮದು ಸುಪ್ರೀಂ ಕೋಟರ್್ ಆದೇಶದಲ್ಲಿ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries